ಇದು ಅಪಾಯವನ್ನು ಹೆಚ್ಚಿಸುತ್ತದೆ. ಬಿಆರ್‌ಸಿಎ 1 ಅಥವಾ 2 ಜೀನ್ ರೂಪಾಂತರಗಳನ್ನು ಹೊಂದಿರುವ ಕುಟುಂಬಗಳಲ್ಲಿ, ಆನುವಂಶಿಕ ತಪಾಸಣೆಯನ್ನು ಶಿಫಾರಸ್ಸು ಮಾಡಲಾಗುತ್ತದೆ. ಜೀವನಶೈಲಿ ಮತ್ತು ದೈನಂದಿನ ಅಭ್ಯಾಸಗಳು ಕ್ಯಾನ್ಸರ್ ಸೇರಿದಂತೆ ಅನೇಕ ಜೀವನಶೈಲಿ ಅಸ್ವಸ್ಥತೆಗಳನ್ನು ತಪ್ಪಿಸಲು ದೊಡ್ಡ ಕಾರಣವಾಗುತ್ತದೆ..
ಬೆಂಗಳೂರು: ಸ್ತನ ಕ್ಯಾನ್ಸರ್ ಸಂಭವಿಸುವಿಕೆ ಯಾಕೆ? ಏನು? ಅದನ್ನು ತಡೆಗಟ್ಟುವಿಕೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನಗರದ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ. ಅರುಣಾ ಮುರಳೀಧರ್ ನೀಡಿದ್ದಾರೆ. ಜನಸಂಖ್ಯಾ ಆಧಾರಿತ ಕ್ಯಾನ್ಸರ್ ನೋಂದಾವಣೆ (ಪಿಬಿಸಿಆರ್) ಪ್ರಕಾರ, ಸ್ತನ ಕ್ಯಾನ್ಸರ್ ವಾರ್ಷಿಕಕವಾಗಿ ಹೆಚ್ಚುತ್ತಿದೆ ಎಂದು ಡಾ. ಅರುಣಾ ಮುರಳೀಧರ್ ತಿಳಿಸಿದ್ದಾರೆ.
ಅಪಾಯಕಾರಿ ಅಂಶಗಳು ಯಾವುವು ಎನ್ನುವುದನ್ನು ವಿವರಿಸುತ್ತಾ, ಭಾರತೀಯ ಮಹಿಳೆಯರ ಜೀವಿತಾವಧಿ ಹೆಚ್ಚಾದಂತೆ ಮುಪ್ಪಿನ ವಯಸ್ಸಿನಲ್ಲಿ ವಿವಿಧ ಕ್ಯಾನ್ಸರ್ ರೋಗಗಳು ಹೆಚ್ಚಾಗುತ್ತಿವೆ. ಪ್ರೌಢವಸ್ಥೆಯನ್ನು ಪಡೆಯುವ ಮಹಿಳೆಯರು ತಡವಾಗಿ ಗರ್ಭಧಾರಣೆಯನ್ನು ಹೊಂದುತ್ತಾರೆ ಮತ್ತು ಕಡಿಮೆ ಸಮಯದವರೆಗೆ ಸ್ತನ್ಯಪಾನ ಮಾಡಿದ್ದಾರೆ ಅಥವಾ ಸ್ತನ್ಯಪಾನ ಮಾಡಿಯೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಬೊಜ್ಜು ಹೊಂದಿರುವವರು ಮತ್ತು ಧೂಮಪಾನ ಮಾಡುವವರು ಸ್ತನ ಕ್ಯಾನ್ಸರ್ ಒಳಗಾಗುವ ಅಪಾಯವನ್ನು ಹೊಂದಿರುತ್ತಾರೆ. ಅಲ್ಲದೆ, ದೀರ್ಘಕಾಲದವರೆಗೆ ಹಾರ್ಮೋನುಗಳ ಅತಿಯಾದ ಬಳಕೆಯು ಕ್ಯಾನ್ಸರ್‌ಗೆ ಕಾರಣವಾಗಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಕ್ಯಾನ್ಸರ್ ಸಂಭವವನ್ನು ಹೆಚ್ಚಿಸುವ ಪರಿಸರ ಅಂಶಗಳೂ ಇವೆ. ಇವುಗಳಲ್ಲಿ ಒತ್ತಡ, ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು, ವಿಶೇಷವಾಗಿ ಕೀಟನಾಶಕಗಳು ಮತ್ತು ಸೋಂಕು ನಿವಾರಕಗಳು, ಬಿಪಿಎ, ಥಾಲೇಟ್‌ಗಳಂತಹ ಪ್ಲಾಸ್ಟಿಕ್‌ಗಳು (ಅವು ಅಂತಃಸ್ರಾವಕ ನಿಯಂತ್ರಕಗಳು). ಗ್ರಿಲ್ಲಿಂಗ್, ಬಾರ್ಬೆಕ್ಯೂ / ತಂದೂರಿ, ಪ್ಯಾನ್-ಫ್ರೈಯಿಂಗ್‌ನಂತಹ ಅಡುಗೆ ವಿಧಾನಗಳು ಹೆಟೆರೊಸೈಕ್ಲಿಕ್ ಆರೊಮ್ಯಾಟಿಕ್ ಅಮೈನ್ಸ್ ಅಥವಾ ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳಂತಹ ಕ್ಯಾನ್ಸರ್ ಜನಕ ಸಂಯುಕ್ತಗಳನ್ನು ಸಹ ಉತ್ಪಾದಿಸಬಹುದು ಎಂದು ಮಾಹಿತಿ ನೀಡುತ್ತಾರೆ.
ಜೀನ್ ಅಭಿವ್ಯಕ್ತಿಯನ್ನು ಬದಲಿಸುವ ಆನುವಂಶಿಕ ರೂಪಾಂತರಗಳು ಮತ್ತು ಎಪಿಜೆನೆಟಿಕ್ ಬದಲಾವಣೆಗಳು ಹೆಚ್ಚಿದ ಮತ್ತು ಅನಿಯಂತ್ರಿತ ಕೋಶ ವಿಭಜನೆ ಮತ್ತು ಬೆಳವಣಿಗೆ ಅಸಹಜ ಕ್ರಿಯೆಗೆ ಕಾರಣವಾಗಬಹುದು. ಬಿಆರ್‌ಸಿಎ 1 ಮತ್ತು 2 ರಂತಹ ಕೆಲವು ಆನುವಂಶಿಕ ರೂಪಾಂತರಗಳು ಕುಟುಂಬಗಳಲ್ಲಿ ಕಂಡು ಬರುತ್ತವೆ ಮತ್ತು ಮಹಿಳೆಯರನ್ನು ಅಂಡಾಶಯ ಮತ್ತು ಸ್ತನ ಕ್ಯಾನ್ಸರ್‌ಗೆ ಹಾಗೂ ಪುರುಷರಲ್ಲಿ ಕರುಳಿನ ಕ್ಯಾನ್ಸರ್‌ಗೆ ಈಡುಮಾಡುತ್ತವೆ ಎಂದು ತಿಳಿಸುತ್ತಾರೆ.
ಸ್ತನ ಕ್ಯಾನ್ಸರ್ನಲ್ಲಿ ಮಾರ್ಪಡಿಸಬಹುದಾದ ಮತ್ತು ಮಾರ್ಪಡಿಸಲಾಗದ ಅಪಾಯಕಾರಿ ಅಂಶಗಳಿವೆ. ಬೊಜ್ಜು, ಸಕ್ರಿಯ ಮತ್ತು ನಿಷ್ಕ್ರಿಯ ಧೂಮಪಾನ, ಸ್ತನ್ಯಪಾನವನ್ನು ತಪ್ಪಿಸುವುದು, ಹಲವಾರು ವರ್ಷಗಳಿಂದ ಹಾರ್ಮೋನುಗಳ ಮಾತ್ರೆಗಳನ್ನು ಬಳಸುವುದು ಕೆಲವು ಮಾರ್ಪಡಿಸಬಹುದಾದ ಅಂಶಗಳಾಗಿವೆ ಎಂದು ಹೇಳುತ್ತಾರೆ. ಸ್ಥೂಲಕಾಯದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದರಿಂದ ಈಸ್ಟ್ರೊಜೆನ್ ಹಾರ್ಮೋನ್ ಹೆಚ್ಚಾಗುತ್ತದೆ.
ಇದು ಅಪಾಯವನ್ನು ಹೆಚ್ಚಿಸುತ್ತದೆ. ಬಿಆರ್‌ಸಿಎ 1 ಅಥವಾ 2 ಜೀನ್ ರೂಪಾಂತರಗಳನ್ನು ಹೊಂದಿರುವ ಕುಟುಂಬಗಳಲ್ಲಿ, ಆನುವಂಶಿಕ ತಪಾಸಣೆಯನ್ನು ಶಿಫಾರಸ್ಸು ಮಾಡಲಾಗುತ್ತದೆ. ಜೀವನಶೈಲಿ ಮತ್ತು ದೈನಂದಿನ ಅಭ್ಯಾಸಗಳು ಕ್ಯಾನ್ಸರ್ ಸೇರಿದಂತೆ ಅನೇಕ ಜೀವನಶೈಲಿ ಅಸ್ವಸ್ಥತೆಗಳನ್ನು ತಪ್ಪಿಸಲು ದೊಡ್ಡ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ವಿಶ್ವ ಕ್ಯಾನ್ಸರ್ ದಿನ: ಕ್ಯಾನ್ಸರ್ ಕುರಿತು ಇರುವ ವದಂತಿಗಳು ಹಾಗೂ ಕಲ್ಪನೆಗಳು
ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಶೇಖರಣೆ ತಪ್ಪಿಸಿ, ಅಡುಗೆಗಾಗಿ ಉಕ್ಕು, ತಾಮ್ರ ಮತ್ತು ಗಾಜನ್ನು ಬಳಸುವುದರಿಂದ ಕ್ಯಾನ್ಸರ್ ಹೆಚ್ಚು ಭಾದಿಸುವುದಿಲ್ಲ. ಅಲ್ಲದೆ ಅರಿಶಿಣ , ಮೆಂತ್ಯ, ಬೆಳ್ಳುಳ್ಳಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅರಿಶಿಣ ಉತ್ಕರ್ಷಣ ರೋಗ ನಿರೋಧಕ ಗುಣಗಳನ್ನು ಹೊಂದಿದ್ದು, ಟ್ಯೂಮರಿಜೆನೆಸಿಸ್ ಪ್ರಗತಿ ಮತ್ತು ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ತಡೆಯುತ್ತದೆ ಹಾಗು ಕೀಮೋ- ಮತ್ತು ರೇಡಿಯೊಥೆರಪಿಯಿಂದ ಉಂಟಾದ ಅಡ್ಡ ಪರಿಣಾಮಗಳನ್ನು ಸರಿ ಪಡಿಸಲು ಸಹಾಯ ಮಾಡುತ್ತದೆ. ಮೆಂತ್ಯವು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ಸ್ತನ ಕ್ಯಾನ್ಸರ್ ಕಂಡುಹಿಡಿಯುವ ವಿಧಾನಗಳಲ್ಲಿ ಸ್ತನ ಸ್ವಯಂ ಪರೀಕ್ಷೆ ಒಂದು. ಒಬ್ಬರ ಸ್ತನಗಳನ್ನು ಬೆರಳುಗಳ ತುದಿಯಿಂದ ಮೇಲಕ್ಕೆ ಮತ್ತು ಕೆಳಕ್ಕೆ ಅಥವಾ ಸುರುಳಿಯಾಕಾರದ ಶೈಲಿಯಲ್ಲಿ ಪರೀಕ್ಷಿಸಬಹುದು. ಯಾವುದೇ ಹಿಂತೆಗೆದುಕೊಳ್ಳುವಿಕೆ, ವಿಸರ್ಜನೆ ಅಥವಾ ಆಕಾರದಲ್ಲಿನ ಬದಲಾವಣೆಗಳಿಗಾಗಿ ಮೊಲೆತೊಟ್ಟುಗಳನ್ನು ಪರೀಕ್ಷಿಸುವುದು ಸಹ ಮುಖ್ಯವಾಗಿದೆ. ಎಲ್ಲಾ ಗಡ್ಡೆಗಳು ಕ್ಯಾನ್ಸರ್ ಅಲ್ಲದಿದ್ದರೂ, ಸ್ತ್ರೀರೋಗತಜ್ಞ ಅಥವಾ ಸ್ತನ ತಜ್ಞರಿಂದ ಹೆಚ್ಚಿನ ಪರೀಕ್ಷೆ ಅಗತ್ಯವಿರುತ್ತದೆ ಎನ್ನುತ್ತಾರೆ ಡಾ. ಅರುಣಾ. ಸ್ತ್ರೀರೋಗತಜ್ಞರ ನಿಯಮಿತ ಆರೋಗ್ಯ ತಪಾಸಣೆಯ ಸಮಯದಲ್ಲಿ ಕ್ಲಿನಿಕಲ್ ಸ್ತನ ಪರೀಕ್ಷೆಯು ಸ್ತನ ಕ್ಯಾನ್ಸರ್ ಅನ್ನು ಮೊದಲೇ ಕಂಡುಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೂಡಾ ತಿಳಿಸಿದರು.
ಯಾವುದೇ ಗಡ್ಡೆ ಪತ್ತೆಯಾದರೆ, ಅದರ ಸ್ವರೂಪವನ್ನು ಪತ್ತೆ ಹಚ್ಚಲು ಅಲ್ಟ್ರಾಸೌಂಡ್ ಮತ್ತು ಮ್ಯಾಮೊಗ್ರಾಮ್ ಅಗತ್ಯವಿರುತ್ತದೆ. 20 ವರ್ಷ ವಯಸ್ಸಿನ ಮಹಿಳೆಯರು ಪ್ರತಿ ತಿಂಗಳು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ಪ್ರಾರಂಭಿಸಬೇಕು. ಕ್ಲಿನಿಕಲ್ ಸ್ತನ ಪರೀಕ್ಷೆಯನ್ನು ಪ್ರತಿ 3 ವರ್ಷಗಳಿಗೊಮ್ಮೆ 30 ವರ್ಷ ವಯಸ್ಸಿನವರೆಗೆ ಅಥವಾ ವಾರ್ಷಿಕವಾಗಿ ಮಾಡಿಸಿಕೊಳ್ಳಬಹುದು ಎಂದು ತಿಳಿಸುತ್ತಾರೆ.
ಈ ಸುದ್ದಿಯನ್ನೂ ಓದಿ: ರಾಜ್ಯದಲ್ಲಿ ಪಲ್ಸ್ ಪೋಲಿಯೋ 102% ಸಾಧನೆ: 65,36,244 ಮಕ್ಕಳಿಗೆ ಲಸಿಕೆ
ಬೇಸ್‌ಲೈನ್ ಮ್ಯಾಮೊಗ್ರಾಮ್ ಎನ್ನುವುದು ಕಿರಿಯ ಪ್ರಥಮ-ಹಂತದ ರೋಗಲಕ್ಷಣಗಳನ್ನು ಪತ್ತೆಹಚ್ಚುವ ಸಲುವಾಗಿ 40 ವರ್ಷ ವಯಸ್ಸಿನ ನಂತರ ಅಥವಾ ಹತ್ತು ವರ್ಷಗಳ ಅಂತರಗಳಲ್ಲಿ ಮಾಡಬೇಕಾದ ಎಕ್ಸರೆ ಪರೀಕ್ಷೆಯಾಗಿದೆ. ಸಂಶೋಧನೆಗಳಿಂದ ಹೇಳುವುದಾದರೆ ಪುನರಾವರ್ತಿತ ಮ್ಯಾಮೊಗ್ರಾಮ್ ಅನ್ನು ಶಿಫಾರನ್ನು ಮಾಡಲಾಗುತ್ತದೆ ಎಂದು ಹೇಳುತ್ತಾರೆ
ಅನುಮಾನಾಸ್ಪದ ಗಡ್ಡೆಯನ್ನು ಕಂಡು ಹಿಡಿದ ನಂತರ ರೋಗವನ್ನು ದೃಢೀಕರಿಸಲು ಸೈಟೋಲಜಿ ಅಥವಾ ಎಮ್.ಆರ್.ಐ ಇಲ್ಲವಾದರೆ ಎರಡನ್ನೂ ಮಾಡಬಹುದು. ಪರೀಕ್ಷೆಗಳ ಫಲಿತಾಂಶಗಳ ನಂತರ, ಸ್ತ್ರೀರೋಗತಜ್ಞರು ಮಹಿಳೆಯನ್ನು ಆಂಕೊಲಾಜಿ ಎನ್ನುವ ತಜ್ಞರ ತಂಡಕ್ಕೆ ಶಿಫಾರಸ್ಸು ಮಾಡುತ್ತಾರೆ. ಸ್ತನ ಕ್ಯಾನ್ಸರ್ ಹಂತ ಮತ್ತು ಪ್ರಕಾರವನ್ನು ಅವಲಂಬಿಸಿ, ನಿರ್ವಹಣೆ ಹೇಗೆ ಮಾಡಬೇಕು ಎನ್ನುವುದನ್ನು ಸ್ತನ ಆಂಕೊಲಾಜಿ ತಂಡ ಚರ್ಚಿಸುತ್ತದೆ. ಕ್ಯಾನ್ಸರ್ ಹಂತ 1 ರಿಂದ ಯಾವುದೇ ಹಂತದಲ್ಲಿರಬಹುದು, 4 ನೇ ಹಂತಕ್ಕೆ ತಲುಪಿದಾಗ ಮೆಟಾಸ್ಟಾಸಿಸ್ನೊಂದಿಗೆ ಸೀಮಿತವಾಗಿರುತ್ತದೆ ಅಥವಾ ಸ್ತನವನ್ನು ಮೀರಿ ಹರಡುತ್ತದೆ ಎನ್ನುತ್ತಾರೆ ಡಾ ಅರುಣಾ.
ಅಲ್ಲದೆ, ಹಾರ್ಮೋನ್ ಸ್ಥಿತಿ, ಎಚ್‌ಇಆರ್ 2 ಸ್ಥಿತಿ, ವಯಸ್ಸು ಮತ್ತು ಬೆಳವಣಿಗೆಯು ಚಿಕಿತ್ಸೆ ಹಾಗೂ ಫಲಿತಾಂಶವನ್ನು ನಿರ್ಧರಿಸುತ್ತದೆ.1 ನೇ ಹಂತದಲ್ಲಿ ಸ್ತನವನ್ನು ತೆಗೆಯುವುದು , ಕೀಮೋಥೆರಪಿ, ರೇಡಿಯೊಥೆರಪಿ, ಹಾರ್ಮೋನುಗಳ ಚಿಕಿತ್ಸೆ ಮತ್ತು ಮುಂದುವರಿದ ಹಂತಗಳಲ್ಲಿ ಎಚ್‌ಇಆರ್ 2 ಉದ್ದೇಶಿತ ಚಿಕಿತ್ಸೆಗೆ ಬದಲಾಗಬಹುದು ಎಂದು ಮಾಹಿತಿ ನೀಡಿದರು.
1 ರಿಂದ 4 ಹಂತದವರೆಗೆ ಸ್ತನ ಕ್ಯಾನ್ಸರ್‌ನಿಂದಾಗಿ ಬದುಕುಳಿಯುವ ಪ್ರಮಾಣವು ಕ್ರಮವಾಗಿ 99%, 87% ನಿಂದ 4 ನೇ ಹಂತದಲ್ಲಿ 27% ಕ್ಕೆ ಇಳಿಯುತ್ತದೆ. ಆದ್ದರಿಂದ, ಬದುಕುಳಿಯುವಿಕೆಯ ಪ್ರಮಾಣವು ಮೊದಲನೇ ಹಂತದಲ್ಲಿ ಹೆಚ್ಚಾಗಿದ್ದು, ರೋಗನಿರ್ಣಯ, ಸಕಾರಾತ್ಮಕ ಮನೋಭಾವ, ಶಿಸ್ತು ಮತ್ತು ಆರೋಗ್ಯಕರ ಜೀವನಶೈಲಿಯ ಪರಿಣಾಮ ಫಲಿತಾಂಶಗಳಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ತಿಳಿಸುತ್ತಾರೆ.
ಸ್ತನ ಕ್ಯಾನ್ಸರ್ ಸಂಭವಿಸುವಿಕೆಯು ಹೆಚ್ಚುತ್ತಿದೆ ಮತ್ತು ಕಾರಣತರಗಳಿಂದ ಬೆಚ್ಚಿಬೀಳಿಸುವಂತಿದೆ. ಆದರೂ ಪ್ರಾಥಮಿಕ ಹಂತದಲ್ಲೇ ತಡೆಗಟ್ಟುವಿಕೆ, ಮುಂಚಿತವಾಗಿ ಪತ್ತೆ ಹಚ್ಚುವುದು ಮತ್ತು ಸೂಕ್ತವಾದ ನಿರ್ವಹಣೆ ಈ ಕಾಯಿಲೆಯನ್ನು ಜಯಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಡಾ. ಅರುಣಾ ಅವರು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.
Source: ಸ್ತನ ಕ್ಯಾನ್ಸರ್ ಕುರಿತು ಡಾ. ಅರುಣಾ ಮುರಳೀಧರ್‌ರಿಂದ ಕೆಲ ಉಪಯುಕ್ತ ಮಾಹಿತಿ (etvbharat.com)
Article Written By: ETV KARNATAKA